ಪುಟ್ಟಕ್ಕನ ಮಕ್ಕಳು ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಜೊತೆ ಜೊತೆಯಲಿ ಟಿವಿ ಸರಣಿಯ ನಿರ್ದೇಶಕರಾದ ಆರೂರು ಜಗದೀಶ್ ಅವರು ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. ಈ ಧಾರಾವಾಹಿಯು 13 ಡಿಸೆಂಬರ್ 2021 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಝಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮವು ಝೀ ತೆಲುಗಿನಲ್ಲಿ ಪ್ರಸಾರವಾಗುವ ತೆಲುಗು ಧಾರಾವಾಹಿ ರಾಧಮ್ಮ ಕುತುರು ರೀಮೇಕ್ ಆಗಿದೆ. ಈ ಸರಣಿಯಲ್ಲಿ ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಂಜನಾ, ಅಕ್ಷರ ಮತ್ತು ಶಿಲ್ಪಾ ನಟಿಸಿದ್ದಾರೆ. ಇದನ್ನು ಟಿವಿ ಪ್ರಸಾರಕ್ಕೂ ಮುಂಚೆಯೇ ಝೀ 5 ನಲ್ಲಿ ವೀಕ್ಷಣೆ ಮಾಡಬಹುದು. == ಕಥೆಯ ಸಾರಾಂಶ == ಪುಟ್ಟಕ್ಕ ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಅವಳ‌ ಗಂಡ ಎರಡನೇ ಮದುವೆಯಾಗಿ ಪುಟ್ಟಕ್ಕಳನ್ನು ಬಿಡುತ್ತಾನೆ. ತನ್ನ ಮೂವರು ಹೆಣ್ಣುಮಕ್ಕಳನ್ನು ಬೆಳಸಲು ಪುಟ್ಟಕ್ಕ ಸಣ್ಣ ಹೋಟೆಲ್ (ಪುಟ್ಟಕ್ಕನ ಮೆಸ್) ನಡೆಸಿ ಜೀವನ ಸಾಗಿಸುತ್ತಾಳೆ. ಧಾರವಾಹಿಯ ಕಥೆಯು ಮೂವರು ಹೆಣ್ಣು ಮಕ್ಕಳನ್ನು ಹೊಂದಿರುವ ಒಬ್ಬ ತಾಯಿಯ ಕುರಿತಾಗಿದೆ. ಪುಟ್ಟಕ್ಕ ಮತ್ತು ಅವಳ ಹೆಣ್ಣು ಮಕ್ಕಳು ಹೇಗೆ ತಮಗೆ ಬಂದ ಎಲ್ಲಾ ಕಷ್ಟಗಳ ವಿರುದ್ಧ ಹೋರಾಡುತ್ತಾರೆ ಎಂಬುವುದೇ ಕಥೆಯ ತಿರುಳಾಗಿದೆ. == ಕಲಾವಿದರು == ಪುಟ್ಟಕ್ಕ ಪಾತ್ರದಲ್ಲಿ ಉಮಾಶ್ರೀ ಅಕ್ಷರಾ ಪಾತ್ರದಲ್ಲಿ ಸಹನಾ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಶಿಲ್ಪಾ ಪಾತ್ರದಲ್ಲಿ ಸುಮಾ ಕಾಂತಿಯಾಗಿ ಧನುಷ್ ಎನ್.ಎಸ್ ಬಂಗಾರಮ್ಮನಾಗಿ ಮಂಜು ಭಾಷಿಣಿ ರಾಜೇಶ್ವರಿಯಾಗಿ ಹಂಸ ಪ್ರತಾಪ್ ಗೋಪಾಲನಾಗಿ ರಮೇಶ್ ಪಂಡಿತ್ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ZEE5 ನಲ್ಲಿ ಪುಟ್ಟಕ್ಕನ ಮಕ್ಕಳು